ವಿಶ್ರಾಂತಿಯ ಸ್ಥಿತಿಯಲ್ಲಿರಲು ಕಲಿಯುವುದರಿಂದ,ಗೊಂದಲದಲ್ಲಿರುವ ಸಮಯದಲ್ಲಿಯೂ ಸಹ ಪ್ರಶಾಂತವಾಗಿರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹವನ್ನು ಮತ್ತಷ್ಟು ಶಾಂತಗೊಳಿಸಲು, ಧ್ವನಿಯ ಕಂಪನ ಮತ್ತು ಉಸಿರಾಟದ ಕ್ರಿಯೆಗಳನ್ನು ಬಳಸುತ್ತದೆ. ನೀವು ಶಾಂತಿಯ ಸ್ಥಿತಿಯಲ್ಲಿ ಇರಲು ಅಭ್ಯಾಸ ಮಾಡಿದಾಗ, ನಿಮ್ಮ ನೈಸರ್ಗಿಕ ಸ್ಥಿತಿಯಾದ ಆರೋಗ್ಯವು ಮರುಕಳಿಸುತ್ತದೆ. ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಓಡುವ ಅಗತ್ಯವಿಲ್ಲದೆ, ನೀವು ಪ್ರತಿ ಕ್ಷಣವನ್ನು ಆನಂದಿಸುವಿರಿ.
ಅಗಲಿದವರ ಶಾಂತಿಗಾಗಿ ಈ ಧ್ಯಾನ
ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.