ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)

ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)

ನಿಮ್ಮ ಪ್ರಯಾಣವನ್ನು ಇಲ್ಲಿಂದ ಪ್ರಾರಂಭಿಸಿ. ಈ ಐದು ಧ್ಯಾನಗಳು ನಿಮ್ಮ ಜೀವನಕ್ಕಾಗಿ ಸಂಪೂರ್ಣವಾದ ಟೂಲ್ಕಿಟ್ ಅನ್ನು ಒದಗಿ

ಬ್ರೀದಿಂಗ್ ರೂಮ್ನ ಮಾಸ್ಟರ್ ಧ್ಯಾನಗಳ ಸರಣಿಯೊಂದಿಗೆ ನಿಮ್ಮ 5 ದಿನಗಳ ಪ್ರಯಾಣವನ್ನು ಪ್ರಾರಂಭಿಸಿ. ಈ 5 ಧ್ಯಾನಗಳು ಶಾಂತಿಯುತ ಜೀವನದ ಅಡಿಪಾಯವನ್ನು ನಿಮ್ಮಲ್ಲಿ ರೂಪಿಸುತ್ತದೆ. ಈ ಸರಣಿಯ ಪ್ರತಿಯೊಂದು ಧ್ಯಾನವು, ಧ್ಯಾನದ ಪ್ರಯೋಜನಗಳನ್ನು ಮತ್ತು ನೀವು ಅದನ್ನು ಯಾವಾಗ ಅಭ್ಯಾಸ ಮಾಡಬೇಕು ಎಂಬುವ ಪರಿಚಯವನ್ನು ಸಹ ಒಳಗೊಂಡಿರುತ್ತದೆ.

ಮೊದಲು, ನೀವು ಶಾಂತಿಯನ್ನು ಬೆಳೆಸುವ ಮತ್ತು ನಿಮ್ಮ ಹೃದಯದ ಬಯಕೆಯನ್ನು ಈಡೇರಿಸುವ ಅಭ್ಯಾಸದಿಂದ ಪ್ರಾರಂಭಿಸುತ್ತೀರಿ. ನಂತರ, ನಿಮ್ಮ ಉಸಿರಾಟವನ್ನು ಗಮನಿಸುವ ಮೂಲಕ ನಿಮ್ಮ ಮನಸ್ಸಿನ ಗೊಂದಲದಿಂದ ಹೊರಬರುತ್ತೀರಿ. ನಿಮ್ಮಲ್ಲಿ ಸ್ಪಷ್ಟತೆ ಮೂಡಿದ ನಂತರ, ನಿಮ್ಮೊಂದಿಗೆ ನಿಮ್ಮ ಸಂಪರ್ಕವನ್ನು ಹೆಚ್ಚಿಸುವ ಮತ್ತು ನಿಮ್ಮ ಅಂತಃಪ್ರಜ್ಞೆಯನ್ನು ಸ್ವಾಗತಿಸುವಂತಹ ಅಭ್ಯಾಸವನ್ನು ಮಾಡಲಿದ್ದೀರ. ಕೊನೆಗೆ, ನಿಮ್ಮ ಶಕ್ತಿ ಮತ್ತು ಚೈತನ್ಯವನ್ನು ನವೀಕರಿಸಲು ಸಹಾಯ ಮಾಡುವ ಉಸಿರಾಟದ ಅಭ್ಯಾಸದೊಂದಿಗೆ ಈ ಸರಣಿಯು ಮುಗಿಯುತ್ತದೆ.

Subscribe Share
ಮಾಸ್ಟರ್ ಮೆಡಿಟೇಶನ್ ಗಳು - ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ (Kannada)
 • ಸೋಲ್ ಸಿಂಕ್: ದಿನ 1 - Soul Sync day 1 (Kannada)

  ಸಾಮರಸ್ಯವನ್ನು ಸೃಷ್ಟಿಸುವಂತಹ ಮತ್ತು ನಿಮ್ಮ ಹೃತ್ಪೂರ್ವಕ ಆಸೆಗಳನ್ನು ನೆರವೇರಿಸುವಂತಹ, ಶಾಂತ ಮತ್ತು ವಿಸ್ತರಣೆಯ ಸ್ಥಿತಿಯನ್ನು ಪ್ರವೇಶಿಸಿ. ಈ ಅಭ್ಯಾಸವು ಉಸಿರಾಟದ ಕ್ರಿಯೆ, ಧ್ವನಿಯ ಕಂಪನ, ಚಿತ್ರೀಕರಣ ಮತ್ತು ಕಲ್ಪನೆಯ ಸಹಾಯದಿಂದ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.

  ಈ ಧ್ಯಾನವನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ಪ್ರತಿದಿನ ಬೆಳಿಗ್ಗೆ ...

 • ಸೆರೀನ್ ಮೈಂಡ್ (ಪ್ರಶಾಂತ ಮನಸ್ಸು)- ದಿನ 2 - Serene mind - Day 2 (kannada)

  ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನಸ್ಸಿನಲ್ಲಿ ಅಸ್ತವ್ಯಸ್ತತೆ ಉಂಟಾದಾಗ, ಈ ಧ್ಯಾನವನ್ನು ಅಭ್ಯಾಸ ಮಾಡಿ, ಆತ್ಮಬಲವನ್ನು ಬೆಳೆ...

 • ಹಾರ್ಟ್ ಕನೆಕ್ಷನ್ : ದಿನ 3 - Heart Connection (Kannada)

  ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ....

 • ವಿಶ್ವಪ್ರಜ್ಞೆಯ ಶಕ್ತಿಯನ್ನು ಪಡೆದುಕೊಳ್ಳುವ ಧ್ಯಾನ- ದಿನ 4 (ರಾತ್ರಿವೇಳೆಯ ಧ್ಯಾನ)

  ನಾವು ನಮ್ಮ ಅಸ್ತಿತ್ವದ ಅರಿವನ್ನು ವಿಸ್ತರಿಸಿದಾಗ, ವಿಶ್ವ ಪ್ರಜ್ಞೆಯನ್ನು ಅನುಭವಿಸಬಹುದು. ಆಗ ನಿಮ್ಮ ಜೀವನದ ಕಠಿಣ ನಿರ್ಧಾರಗಳಿಗೆ, ನೀವು ಸ್ಪಷ್ಟತೆ ಮತ್ತು ಉತ್ತರಗಳನ್ನು ಪಡೆಯುವಿರಿ. 5 ನಿಮಿಷಗಳ ಈ ಧ್ಯಾನವು ನಿಮ್ಮಉಸಿರಾಟ ಮತ್ತು ಚಿತ್ರೀಕರಣವನ್ನು ಉಪಯೋಗಿಸಿ, ನಿಮ್ಮನ್ನು ಭಯದಿಂದ ಅಂತಃಪ್ರಜ್ಞೆಯ ಎಡೆ ಕರೆದೊಯ್ಯುತ್ತದೆ. ಈ ಸ್ಥಿತಿಯಲ್ಲಿ, ನಿಜವಾದ ತಿಳುವಳಿಕೆ...

 • ನವೀಕರಣದ ಉಸಿರು: 5 ನೇ ದಿನ - Breath of renewal (Kannada)

  ಉಸಿರಾಟವು ನಮ್ಮನ್ನು ಕಾಪಾಡುತ್ತಿರುವ ಜೀವ ಶಕ್ತಿ. ನಮ್ಮ ದೇಹದ 80% ವಿಷ ಪದಾರ್ಥಗಳು ಉಸಿರಾಟದ ಮೂಲಕ ಹೊರಹಾಕಲ್ಪಡುತ್ತದೆ. ನಿಮ್ಮ ಚೈತನ್ಯವನ್ನು ನವೀಕರಿಸಲು, ಉಸಿರಾಟದ ಕ್ರಿಯೆಯನ್ನು ಉಪಯೋಗಿಸುವ ಈ 10 ನಿಮಿಷಗಳ ಧ್ಯಾನವನ್ನು ಕಲಿಯಿರಿ. ಈ ಧ್ಯಾನವನ್ನು 5 ಉಸಿರಾಟದ ಶಕ್ತಿಗಳನ್ನು ಹೊಂದಿರುವ ಪ್ರಾಚೀನ ಭಾರತೀಯ ಅಭ್ಯಾಸವಾಗಿರುತ್ತದೆ. ಇದರ ಮೇಲೆ ಆಧಾರಪಟ್ಟಿರುವ ಧ್ಯ...