Live stream preview
ಶಾಂತಿಯುತ ಜಗತ್ತನ್ನು ಸೃಷ್ಟಿಸುವಂತಹ ಆಂತರಿಕ ಶಾಂತಿಯ ಸ್ಥಿತಿಗೆ ಜಾಗೃತಗೊಳ್ಳಿ.
ಈ ಶಾಂತಿ ಧ್ಯಾನಗಳು ಮಾನವ ಚೈತನ್ಯದಲ್ಲಿ ಶಾಂತಿಯತ್ತ ಮಾಡುವಂತಹ ಒಂದು ಪ್ರಯಾಣವಾಗಿರುತ್ತದೆ. ಶಾಂತಿಯುತ ಪ್ರಪಂಚದ ನಿರ್ಮಾಣಕ್ಕಾಗಿ ಧ್ಯಾನಿಸುತ್ತಿರುವ ಪ್ರತಿ ರಾಷ್ಟ್ರದ ಲಕ್ಷಾಂತರ ಜನರ ಜೊತೆ ನೀವು ಸೇರಿಕೊಳ್ಳಿ. 9 ನಿಮಿಷಗಳ ಈ ಧ್ಯಾನವು ಉಸಿರಾಟ, ಭಾವನೆ ಮತ್ತು ಕಲ್ಪನೆಯನ್ನು ಒಳಗೊಂಡಿರುತ್ತದೆ. ಹೋರಾಟವನ್ನು ಕಡಿಮೆ ಮಾಡಿ, ಹಾಯಾಗಿ ಬದುಕುವುದು ಹೇಗೆ ಎಂಬುವುದನ್ನು ಈ ಧ್ಯಾನವು ನಿಮಗೆ ಕಲಿಸುತ್ತದೆ.
ನಾವು ಈ ಸುಂದರವಾದ ಶಾಂತಿಯ ಸ್ಥಿತಿಗೆ ಜಾಗೃತಗೊಂಡು, ಒಟ್ಟಿಗೆ ಸೇರಿ ಧ್ಯಾನ ಮಾಡಿದಾಗ, ನಾವು ಯುದ್ಧ, ಸಂಘರ್ಷ ಮತ್ತು ಹಿಂಸೆಯನ್ನು ಕಡಿಮೆ ಮಾಡುವಂತಹ ಶಕ್ತಿಯುತವಾದ ಕ್ಷೇತ್ರವನ್ನು ಉತ್ಪತ್ತಿ ಮಾಡುತ್ತೇವೆ. ನಾವು ಶಾಂತಿಯ ವಾಹನಗಳಾಗುತ್ತೇವೆ. ವೈಯಕ್ತಿಕ ಪರಿವರ್ತನೆ ವಿಶ್ವ ಪರಿವರ್ತನೆಗೆ ಕಾರಣವಾಗುತ್ತದೆ. ನಿಮ್ಮ ಶಾಂತಿಯೇ ವಿಶ್ವ ಶಾಂತಿ.
8 Comments