ಧ್ಯಾನ ಎಂದರೇನು? (Kannada)
ಉಚಿತ ಧ್ಯಾನಗಳು (Kannada)
•
3m 7s
ಧ್ಯಾನ ಎಂದರೇನು ಮತ್ತು ಬ್ರೀದಿಂಗ್ ರೂಮ್ ಹೇಗೆ ಭಿನ್ನವಾಗಿದೆ?
ಧ್ಯಾನವೆಂಬುದುಕ್ಕೆ ಹಲವಾರು ವ್ಯಾಖ್ಯಾನಗಳು ಇದ್ದರೂ ಸಹ, ನಮ್ಮ ಪ್ರಕಾರ ಧ್ಯಾನವೆಂದರೆ - ಮನಸ್ಸಿನಲ್ಲಿರುವ ಗೊಂದಲವನ್ನು ಅಂತ್ಯ ಮಾಡಿ, ಶಾಂತಿ ಹಾಗೂ ಆನಂದದ ಸ್ಥಿತಿಯನ್ನು ಅನುಭವಿಸುವುದು ಎಂದರ್ಥ. ಧ್ಯಾನವೆಂದರೆ ಒಂದು ಫ್ಯಾಶನ್ ಅಲ್ಲ. ಧ್ಯಾನವೆಂದರೆ ಕೇವಲ ಏಕಾಗ್ರತೆ ಮತ್ತು ಸ್ವ-ನಿಯಂತ್ರಣಕ್ಕಾಗಿರುವ ಒಂದು ಸಾಧನವೂ ಅಲ್ಲ. ಧ್ಯಾನವೆಂದರೆ ನಿರಂತರವಾದ ಆನಂದ, ಉತ್ಸಾಹ ಹಾಗೂ ಸದ್ವಿಚಾರಗಳನ್ನು ಹೊಂದಿರುವಂತಹ ಸುಂದರವಾದ ಸ್ಥಿತಿಗಳಿಗೆ ಜಾಗೃತಗೊಳ್ಳಲು ಇರುವ ಮಾರ್ಗ.
ನಮ್ಮ ಧ್ಯಾನಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕಾದರೆ, ನೀವು ಉಸಿರಾಟ-ಮನಸ್ಸು- ಚೈತನ್ಯದ ‘ಯೋಗ ತ್ರಯ’ದ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಈ ಯೋಗ ತ್ರಯದ ಮೂರು ಅಂಶಗಳ ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಂಡರೆ, ನೀವು ಒತ್ತಡ ಮತ್ತು ಗೊಂದಲಗಳನ್ನು ಮೀರಿ ಶಾಂತಿ, ಸ್ಪಷ್ಟತೆ ಮತ್ತು ಪ್ರೀತಿಯನ್ನು ಅನುಭವಿಸುವಿರಿ. ಹೆಚ್ಚಿನ ಧ್ಯಾನಗಳು ಈ ಮೂರು ಅಂಶಗಳಲ್ಲಿ ಒಂದು ಅಥವಾ ಎರಡು ಅಂಶಗಳನ್ನು ಮಾತ್ರ ಬಳಸುತ್ತವೆ. ಆದರೆ ನಮ್ಮ ವಿಧಾನವು ಮೂರನ್ನು ಸಹ ಹೊಂದಿರುತ್ತದೆ.
Up Next in ಉಚಿತ ಧ್ಯಾನಗಳು (Kannada)
-
ಬ್ರೀದಿಂಗ್ ರೂಮನ್ನು ಕುರಿತು (Kannada)
ಬ್ರೀದಿಂಗ್ ರೂಂಗೆ ಸ್ವಾಗತ!
ಹಲೋ ನಾನು ಪ್ರೀತಾಜಿ. ಶಾಂತಿ ಮತ್ತು ಪ್ರೇರಿತ ಜೀವನಕ್ಕಾಗಿ, ನಿಮ್ಮ ಟೂಲ್ ಗೇಟ್ ಆದ ಬ್ರೀದಿಂಗ್ ರೂಂಗೆ ನಾನು ನಿಮ್ಮನ್ನು ಸ್ವಾಗತಿಸಲು ಬಯಸುತ್ತೇನೆ. ಇದು ಹಲವಾರು ಶಕ್ತಿಯುತವಾದ ಧ್ಯಾನಗಳನ್ನು ಹೊಂದಿದ್ದು ,ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು - ಧ್ಯಾನದಲ್ಲಿ ಪ್ರಾರಂಭಿಕರಿಂದ ಹಿಡಿದು ಬಹಳಷ್ಟು ಅನುಭವವಿರುವ ಜನರವರೆಗೂ ಮಾಡುತ...
-
ಸೋಲ್ ಸಿಂಕ್ (Kannada)
ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ.
ಪ್ರಶಾಂತತೆಯ ಸ್ಥಿತಿಯನ್ನು ಪ್ರವೇಶಿಸಿ, ಸಾಮರಸ್ಯದಿಂದ ನಿಮ್ಮ ಹೃದಯಾಂತರಾಳದ ಬಯಕೆಗಳನ್ನು ಸೃಷ್ಟಿಸಿ. ಉಸಿರಾಟ, ಧ್ವನಿಯ ಕಂಪನ, ಕಲ್ಪನೆ ಮತ್ತು ಗಮನಿಸುವಿಕೆ - ಇವೆಲ್ಲವೂ ನಿಮಗೆ ನಿಮ್ಮ ಜೀವನದೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ.
ಈ ಧ್ಯಾನವನ್ನು ಅನುಭವಿಸುವ ಉತ್ತಮವಾ...
-
ಸೆರೀನ್ ಮೈಂಡ್ ಅಭ್ಯಾಸ (Kannada)
ಪ್ರಶಾಂತತೆಗೆ ಜಾಗೃತರಾಗಿ
ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಧ್ಯಾನವಾಗಿದ್ದು, ಸೀಮಿತವಾದ ನಿಮ್ಮ ಆಂತರಿಕ ಅಸೌಕರ್ಯ ಮತ್ತು ಗೊಂದಲವನ್ನು ನೀಗಿಸಿ, ಶಾಂತಿಯತ್ತ ಸಾಗಲು ನಿಮಗೆ ಸಹಾಯ ಮಾಡುತ್ತದೆ.